<img src="https://trc.taboola.com/1321591/log/3/unip?en=page_view" width="0" height="0" style="display:none">
Fact Check Library

Fact Check with Logically.

Download the Free App Today

Misleading
misleading

CLAIM ID

b69e7abf

೨೦೨೩ರ ಕರ್ನಾಟಕ ಬಜೆಟ್ ನಲ್ಲಿ ೭೫ ಯೂನಿಟ್‌ಗಳ ಉಚಿತ ವಿದ್ಯುತ್ ಸೌಲಭ್ಯವನ್ನು ಪ್ರತ್ಯೇಕವಾಗಿ ನಿಯೋಜಿಸಲಾಗಿಲ್ಲ.

ಈ ಯೋಜನೆಯು ೨೦೧೭ ರಿಂದ ಚಾಲನೆಯಲ್ಲಿದೆ. ರಾಜ್ಯದ ಬಜೆಟ್ ನಲ್ಲಿ ಪ್ರತ್ಯೇಕವಾಗಿ ನಿಯೋಜಿಸಿದಲ್ಲ. ಮೇ ೨೦೨೨ರಲ್ಲಿ ಉಚಿತ ಯೂನಿಟ್‌ಗಳ ಸಂಖ್ಯೆ ೪೦ ರಿಂದ ೭೫ಕ್ಕೆ ಹೆಚ್ಚಳ ಮಾಡಲಾಗಿತ್ತು.


ಸಂದರ್ಭ 

ಫೆಬ್ರವರಿ ೧೭ ರಂದು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ೨೦೨೩-೨೦೨೪ರ ರಾಜ್ಯ ಬಜೆಟ್ ಅನ್ನು ಮಂಡಿಸಿದರು. ಇದನ್ನು ಕುರಿತು ಭಾರತೀಯ ಜನತಾ ಪಕ್ಷ (ಬಿಜೆಪಿ) "ಎಲ್ಲಾ ಕ್ಷೇತ್ರಗಳಿಗೂ ಬಂಪರ್ ಅನುದಾನವೆಂದು" ಹೇಳಿತು. ಆದರೆ ವಿರೋಧ ಪಕ್ಷವಾದ ಕಾಂಗ್ರೆಸ್, ಸರ್ಕಾರವು ಹಿಂದಿನ ಬಜೆಟ್‌ನಲ್ಲಿ ನೀಡಿದ ತಮ್ಮ ಭರವಸೆಗಳನ್ನು ಈಡೇರಿಸದೆ ಜನರನ್ನು ವಂಚಿಸುತ್ತಿದೆ ಎಂದು ಆರೋಪಿಸಿದೆ. ಈ ಹಿನ್ನಲೆಯಲ್ಲಿ, ಬಜೆಟ್ ಅನ್ನು ಪ್ರಶ್ನಿಸುತ್ತಾ ಹಲವಾರು ಪೋಷ್ಟ್ ಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡತೊಡಗಿದವು.

ಅಂತಹ ಒಂದು ಟ್ವಿಟ್ಟರ್ ಪೋಷ್ಟ್, "ಬಿಜೆಪಿ ಕರ್ನಾಟಕ ಬಜೆಟ್ ೨೦೨೩: ಸಿಎಂ (ಮುಖ್ಯಮಂತ್ರಿ) ಎಸ್‌ಸಿ-ಎಸ್‌ಟಿ (ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡ) ಸಮುದಾಯಕ್ಕೆ ಮಾತ್ರ ಉಚಿತ ವಿದ್ಯುತ್ ಘೋಷಿಸಿದ್ದಾರೆ. ಉಲ್ಲೇಖಿಸಲಾದ ವರ್ಗಗಳಿಗೆ ಸೇರಿದ ಬಿಪಿಎಲ್ (ಬಡತನ ರೇಖೆಗಿಂತ ಕೆಳಗಿರುವ) ಕಾರ್ಡ್ ಹೊಂದಿರುವವರು ೭೫ ಯೂನಿಟ್ ಉಚಿತ ವಿದ್ಯುತ್ ಪ್ರತಿ ತಿಂಗಳು. ಸಬ್ಕಾ ಸಾಥ್ ಸಬ್ಕಾ ವಿಕಾಸ್!" ಎಂದು ಟೀಕಿಸಿದೆ. ೧೧೩,೯೦೦ ರಷ್ಟು ವೀಕ್ಷಣೆಗಳನ್ನು ಪೋಷ್ಟ್ ಹೊಂದಿದೆ.


ವಾಸ್ತವವಾಗಿ

ಕಳೆದ ವರ್ಷ ಮೇ ೨೮ ರಂದು ಪ್ರಕಟವಾದ ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ ಕರ್ನಾಟಕ ಸರ್ಕಾರವು ರಾಜ್ಯದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಎಲ್ಲಾ ಗ್ರಾಮೀಣ ಎಸ್‌ಸಿ/ಎಸ್‌ಟಿ ಕುಟುಂಬಗಳಿಗೆ ಪ್ರತಿ ತಿಂಗಳು ೭೫ ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ಸೌಲಭ್ಯವನ್ನು ಘೋಷಿಸಿತ್ತು. ಈ ಹಿಂದೆ ಭಾಗ್ಯಜ್ಯೋತಿ ಅಥವಾ ಕುಟೀರ ಜ್ಯೋತಿ ಯೋಜನೆಯ ಅಡಿಯಲ್ಲಿ ೪೦ ಯೂನಿಟ್ ಉಚಿತ ವಿದ್ಯುತ್ ನೀಡಲಾಗಿತ್ತು. ಯೋಜನೆಯ ಪ್ರಕಾರ, ಫಲಾನುಭವಿಗಳು ಮಾಸಿಕ ವಿದ್ಯುತ್ ಬಿಲ್ ಅನ್ನು ಪಾವತಿಸುತ್ತಾರೆ ಮತ್ತು ೭೫ ಯುನಿಟ್‌ಗಳ ವೆಚ್ಚವನ್ನು ಸರ್ಕಾರವು ನೇರ ಲಾಭ ವರ್ಗಾವಣೆ ಮೂಲಕ ಸಹಾಯಧನವಾಗಿ ಮರುಪಾವತಿ ಮಾಡುತ್ತದೆ. ಫಲಾನುಭವಿಗಳು ತಮ್ಮ ಬಿಪಿಎಲ್ ಪಡಿತರ ಚೀಟಿಗಳು, ಆಧಾರ್ ಕಾರ್ಡ್‌ಗಳು, ನಿವಾಸ/ವಾಸಸ್ಥಳ ಸಂಖ್ಯೆ ಮತ್ತು ಜಾತಿ ಪ್ರಮಾಣಪತ್ರಗಳನ್ನು ಸರಬರಾಜು ಕಂಪನಿಗಳಿಗೆ ಸಲ್ಲಿಸಬೇಕು ಎಂದು ವರದಿಯಲ್ಲಿ ವಿವರಿಸಲಾಗಿದೆ. ಈ ಪರಿಷ್ಕೃತ ಯೋಜನೆಯು ಮೇ ೧, ೨೦೨೨ ರಿಂದ ಜಾರಿಗೊಳಿಸಲಾಗಿತ್ತು. ಮೇ ೧೩, ೨೦೨೨ರ ಡೆಕ್ಕನ್ ಹೆರಾಲ್ಡ್ ನ ಲೇಖನವೂ ಸಹ ಈ ಯೋಜನೆಗಳು ೨೦೧೭ರಿಂದ ಕಾರ್ಯನಿರ್ವಹಿಸುತ್ತಿದೆ ಮತ್ತು ೨೦೨೨ ರಲ್ಲಿ ಕೇವಲ ಉಚಿತ ಯೂನಿಟ್‌ಗಳ ಸಂಖ್ಯೆಯನ್ನು ಹೆಚ್ಚಿಸಲಾಗಿತ್ತು ಎಂದು ದೃಢಪಡಿಸಿದೆ.

ಕರ್ನಾಟಕ ಮುಖ್ಯಮಂತ್ರಿಯವರ ಅಧಿಕೃತ ಟ್ವಿಟರ್ ಖಾತೆಯಲ್ಲಿ ಡಿಸೆಂಬರ್ ೨೦೧೭ರ ಹಿಂದಿನ ಪೋಷ್ಟ್ ಅನ್ನು ನಾವು ಕಂಡುಕೊಂಡಿದ್ದೇವೆ . ಇದರ ಶೀರ್ಷಿಕೆ, "ಭಾಗ್ಯಜ್ಯೋತಿ ಮತ್ತು ಕುಟೀರ ಜ್ಯೋತಿಯನ್ನು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ಮನೆಗಳಿಗೆ ವಿದ್ಯುತ್ ಒದಗಿಸಲು ಪರಿಚಯಿಸಲಾಗಿದೆ" ಎಂದು ಹೇಳುತ್ತದೆ. ೨೦೧೭ರಲ್ಲಿ ರಾಜ್ಯ ಸರ್ಕಾರವನ್ನು ಕಾಂಗ್ರೆಸ್ ಮುನ್ನಡೆಸಿದ್ದು, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದರು.

"ಭಾಗ್ಯ ಜ್ಯೋತಿ" ಯೋಜನೆಯನ್ನು ೧೯೭೯ ರಲ್ಲಿ ರಾಜ್ಯಕ್ಕೆ ಪರಿಚಯಿಸಲಾಯಿತು. ಸರ್ಕಾರಿ ದಾಖಲೆಯ ಪ್ರಕಾರ, ಎಸ್‌ಸಿ/ಎಸ್‌ಟಿ ಸಮುದಾಯಗಳು ಮತ್ತು ಇತರ ದುರ್ಬಲ ವರ್ಗಗಳಿಗೆ ಸೇರಿದ ಮನೆಗಳಿಗೆ ವಿದ್ಯುತ್ ಒದಗಿಸುವುದು ಇದರ ಉದ್ದೇಶವಾಗಿತ್ತು.

ನಾವು ೨೦೨೩ರ ರಾಜ್ಯ ಬಜೆಟ್‌ನ ಮುಖ್ಯಾಂಶಗಳನ್ನೂ ಸಹ ಪರಿಶೀಲಿಸಿದೆವು ಮತ್ತು ಯೋಜನೆಗಳಿಗೆ ಸಂಬಂಧಿಸಿದಂತೆ ಯಾವುದೇ ಹೊಸ ಪುನರಾವರ್ತನೆಗಳು ಕಂಡುಬಂದಿಲ್ಲ. ಬೊಮ್ಮಾಯಿ ಅವರು ೨೦೨೩ರ ಬಜೆಟ್‌ನಲ್ಲಿ ಈ ನಿಬಂಧನೆಗಳ ಬಗ್ಗೆ ಮಾತನಾಡಿದ್ದರೂ, ಅವುಗಳನ್ನು ಹೆಚ್ಚಿನ ಜನರಿಗೆ ತಲುಪಲು ವಿಸ್ತರಿಸಲಾಗಿತ್ತು ಎಂದು ಮಾತ್ರ ಗಮನಿಸಿದರು.


ತೀರ್ಪು 

ಎಸ್‌ಸಿ-ಎಸ್‌ಟಿ ಕುಟುಂಬಗಳಿಗೆ ಉಚಿತ ವಿದ್ಯುತ್ ಪೂರೈಕೆಯನ್ನು ನೀಡುವ ಯೋಜನೆಯು ೨೦೧೭ ರಿಂದ ಕಾರ್ಯನಿರ್ವಹಿಸುತ್ತಿದೆ ಮತ್ತು ೨೦೨೩ ರ ರಾಜ್ಯ ಬಜೆಟ್‌ಗೆ ಮೊದಲು ೨೦೨೨ ರಲ್ಲಿ ನವೀಕರಿಸಲಾಗಿದೆ. ಆದ್ದರಿಂದ ಈ ಹೇಳಿಕೆಯು ಸಂದರ್ಭದಿಂದ ಹೊರಗಿಡಲಾಗಿದೆ ಎಂದು ನಾವು ಗುರುತಿಸಿದ್ದೇವೆ. 

Have a question or correction on one of our fact-checks?

If you think a claim has been misjudged or requires correction, please send us evidence to support your error claim. We will revisit our evidence and verdict and conduct additional research to verify new information.

Fact Check of the Day

misleading

397 children were diagnosed with heart inflammation after receiving Pfizer’s COVID-19 vaccine in U.S.