<img src="https://trc.taboola.com/1321591/log/3/unip?en=page_view" width="0" height="0" style="display:none">
Fact Check Library

Fact Check with Logically.

Download the Free App Today

Misleading
misleading

CLAIM ID

1e60bd10

ರಾಹುಲ್ ಗಾಂಧಿಯವರು ಸತ್ಯಾಗ್ರಹದ ಬಗ್ಗೆ ಮಾತನಾಡುವಾಗ ತಡವರಿಸಿದ ವೀಡಿಯೋವೊಂದನ್ನು ಎಡಿಟ್ ಮಾಡಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ.

ರಾಹುಲ್ ಗಾಂಧಿ ಸತ್ಯಾಗ್ರಹದ ಬಗ್ಗೆ ಮಾತನಾಡುವಾಗ ತಡವರಿಸಿದರು. ಆದರೆ ಕೂಡಲೇ ತಿದ್ದಿಕೊಂಡು ಸರಿಯಾದ ಅರ್ಥವನ್ನು ಹೇಳಿರುವ ವೀಡಿಯೋದ ಭಾಗವನ್ನು ಎಡಿಟ್ ಮಾಡಿ ಅಪಹಾಸ್ಯ ಮಾಡಲಾಗಿದೆ.

ಸಂದರ್ಭ

ಕಳೆದ ತಿಂಗಳು ಛತ್ತೀಸಗಢದಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ೮೫ ನೇ ಸರ್ವಸದಸ್ಯರ ಮಹಾ ಅಧಿವೇಶನವು (Plenary Session) ಹಲವಾರು ತಪ್ಪು ಮಾಹಿತಿಗಳಿಗೆ ಗುರಿಯಾಯಿತು. ಪ್ರತಿನಿಧಿಗಳು ಮತ್ತು ಮುಖಂಡರು ಪ್ರಮುಖ ರಾಜಕೀಯ ಮತ್ತು ಆರ್ಥಿಕ ವಿಷಯಗಳ ಕುರಿತು ಚರ್ಚಿಸಿದ ಮೂರು ದಿನಗಳ ಸಭೆಯು ಫೆಬ್ರವರಿ ೨೬ ರಂದು ಮುಕ್ತಾಯಗೊಂಡಿತು. ಈ ಹಿನ್ನಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು "ಸತ್ಯಾಗ್ರಹವನ್ನು" ಕುರಿತು ಮಾತನಾಡುವ ೨೪ ಸೆಕೆಂಡುಗಳ ಕ್ಲಿಪ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡತೊಡಗಿತು. ಸಭೆಯನ್ನು ಉದ್ದೇಶಿಸಿ ಮಾತನಾಡುವಾಗ ಕಾಂಗ್ರೆಸ್ ನಾಯಕ "ಸತ್ಯಾಗ್ರಹವನ್ನು ಅಧಿಕಾರದೆಡೆಗಿನ ಹಾದಿ ಎಂದು ವಿವರಿಸಿದ್ದಾರೆ" ಎಂದು ಹೇಳುವ ಪೋಷ್ಟ್ ಗಳು ವೈರಲ್ ಆಗಿವೆ. ಅಂತಹ ಒಂದು ಟ್ವಿಟ್ಟರ್ ಪೋಷ್ಟ್ ನ ಶೀರ್ಷಿಕೆ ಹೀಗಿದೆ, "ಇದು...ಇದು..ಈ ಮಾತು ಅಂದ್ರೆ... ಹೊಚ್ಚ ಹೊಸತು... ಕೊಹಿನೂರ್ ವಜ್ರ. ಪಪ್ಪು: ಮಹಾತ್ಮ ಗಾಂಧಿ ಸತ್ಯಾಗ್ರಹದ ಬಗ್ಗೆ ಹೇಳಿದ್ದರು. ಸತ್ಯಾಗ್ರಹ ಅಂದರೆ ಅಧಿಕಾರದ ಹಾದಿಯನ್ನು ಎಂದಿಗೂ ಬಿಡದಿರುವುದು. ಯಪ್ಪಾ." ಇದರಂತೆ ಟೀಕಿಸುವ ಹಲವಾರು ಪೋಷ್ಟ್ ಗಳನ್ನು ಭಾರತೀಯ ಜನತಾ ಪಕ್ಷದ (BJP) ಅಧಿಕೃತ ಖಾತೆಗಳಿಂದಲೂ ವೈರಲ್ ಮಾಡಲಾಗಿದೆ. ರಾಹುಲ್ ಗಾಂಧಿಯವರಿಗೆ ಸತ್ಯಾಗ್ರಹದ ಅರ್ಥವೇ ತಿಳಿಯಬಲ್ಲದು ಎಂದು ಅಪಹಾಸ್ಯ ಮಾಡುವ ಪೋಷ್ಟ್ ಗಳು ಫೇಸ್ಬುಕ್ ನಲ್ಲಿಯೂ ಸಹ ಹಂಚಿಕೊಳ್ಳಲಾಗಿದೆ.  

ವಾಸ್ತವವಾಗಿ

ರಾಹುಲ್ ಗಾಂಧಿಯವರು ಅಧಿವೇಶನದಲ್ಲಿ ಆಡಿದ ಸಂಪೂರ್ಣ ಭಾಷಣದ ವೀಡಿಯೋ ಅವರ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಲಭ್ಯವಿದೆ. ೪೭ ನಿಮಿಷಗಳ ವೀಡಿಯೋದಲ್ಲಿ ೩೫ ನಿಮಿಷಗಳ ಕಾಲಾವಧಿಯಲ್ಲಿ, ಗಾಂಧಿ ಸತ್ಯಾಗ್ರಹದ ಬಗ್ಗೆ ಮಾತನಾಡುತ್ತಾರೆ ಮತ್ತು ಹಿಂದಿಯಲ್ಲಿ ಹೇಳುತ್ತಾರೆ: "ಮಹಾತ್ಮ ಗಾಂಧಿಯವರು ಸತ್ಯಾಗ್ರಹದ ಬಗ್ಗೆ ಮಾತನಾಡುತ್ತಿದ್ದರು. ಸತ್ಯಾಗ್ರಹ ಎಂದರೆ 'ಅಧಿಕಾರದೆಡೆಗಿನ ಹಾದಿ' (ಸತ್ತಾ) ಅನ್ನು ಎಂದಿಗೂ ಬಿಡಬೇಡಿ." ಆದರೆ ತಕ್ಷಣವೇ ಅವರ ಮಾತನ್ನು ಸರಿಪಡಿಸಿಕೊಳುತ್ತಾ, "ಕ್ಷಮಿಸಿ, ಎಂದಿಗೂ ಸತ್ಯದ ಮಾರ್ಗವನ್ನು (ಸತ್ಯ) ಬಿಡಬಾರದು" ಎಂದು ಹೇಳಿದರು. 'ಸತ್ಯಾಗ್ರಹ' ಎಂಬ ಪದವನ್ನು ವಿವರಿಸುವಾಗ ಗಾಂಧಿಯವರು ಹಿಂದಿ ಭಾಷೆಯಲ್ಲಿ ಅಧಿಕಾರ ಎನ್ನುವ ಅರ್ಥ ಬರುವ "ಸತ್ತ" ಎಂಬ ಪದವನ್ನು ಬಳಸಿದರು, ಆದರೆ ನಂತರ ತಮ್ಮನ್ನು ತಾವು ಸರಿಪಡಿಸಿಕೊಂಡು "ಸತ್ಯ" ಎಂಬ ಪದವನ್ನು ಬಳಸಿದರು. ಗಾಂಧಿ ಅವರಿಗೆ ಸತ್ಯಾಗ್ರಹದ ಅರ್ಥ ತಿಳಿದಿಲ್ಲ ಎಂದು ಹೇಳುವ ಟ್ವೀಟ್‌ಗಳು ಈ ಭಾಷಣದಲ್ಲಿ ಗಾಂಧಿಯವರ ತಡವರಿಸಿದ ಭಾಗವನ್ನು ಮಾತ್ರ ಹಂಚಿಕೊಳುತ್ತಾ ತಪ್ಪು ಮಾಹಿತಿಯನ್ನು ಹರಡುತ್ತಿವೆ. ಗಾಂಧಿಯವರು ತಪ್ಪನ್ನು ಸರಿಪಡಿಸಿಕೊಂಡು ಸರಿಯಾದ ಅರ್ಥ ಹೇಳಿರುವ ಭಾಗವನ್ನು ಎಡಿಟ್ ಮಾಡಲಾಗಿದೆ.

ಫೆಬ್ರವರಿ ೨೬ ರಂದು ದಿ ಹಿಂದೂ ಪ್ರಕಟಿಸಿದ ವರದಿಯಲ್ಲಿ ಗಾಂಧಿಯವರು ಭಾಷಣದಲ್ಲಿ ತಡವರಿಸಿ ಮತ್ತು ಅವರು ಸರಿಪಡಿಸಿಕೊಂಡು ಮಾತನಾಡಿದ ಘಟನೆಯ ಬೆಗ್ಗೆ ನಾವು ನೋಡಬಹುದು. ೨೪-ಸೆಕೆಂಡ್ ಗಳ ವೈರಲ್ ವೀಡಿಯೋದಲ್ಲಿ ಹರಿದಾಡುತ್ತಿರುವ ಹೇಳಿಕೆಯು ಗಾಂಧಿಯವರನ್ನು ಟೀಕಿಸಿಸುತ್ತಾ ಅವರ ಸಾಮರ್ಥ್ಯ ಮತ್ತು ಬುದ್ಧಿವಂತಿಕೆಯನ್ನು ಅಪಹಾಸ್ಯ ಮಾಡಲು ಬಳಸಿರುವ ನಿರೂಪಣೆಯ ಭಾಗವಾಗಿದೆ.

ಸರ್ವಸದಸ್ಯರ ಅಧಿವೇಶನದಲ್ಲಿ, ಗಾಂಧಿಯವರು ತಮ್ಮ ಭಾಷಣದಲ್ಲಿ ಬಿಜೆಪಿಯನ್ನು ಟೀಕಿಸುತ್ತಾ ಅವರು ಅಧಿಕಾರಕ್ಕಾಗಿ ಮಾತ್ರ ಹಂಬಲಿಸುತ್ತಾರೆ ಎಂದು ಆರೋಪಿಸಿದರು. ಆದರೆ ಕಾಂಗ್ರೆಸ್ ಸತ್ಯವನ್ನು ಪ್ರಚೋದಿಸುತ್ತದೆ. "ನಾವು (ಕಾಂಗ್ರೆಸ್) ಸತ್ಯಾಗ್ರಹಿಗಳು (ಸತ್ಯವನ್ನು ಬಿಂಬಿಸುತ್ತೇವೆ), ಮತ್ತು ಅವರು 'ಸತ್ತಾಗ್ರಹಿ' (ಅಧಿಕಾರವನ್ನು ಹುಡುಕುವವರು)" ಎಂದು ಅವರು ಹೇಳಿದರು. 

ತೀರ್ಪು

ರಾಹುಲ್ ಗಾಂಧಿಯವರು ಭಾಷಣದಲ್ಲಿ ಸತ್ಯಾಗ್ರಹದ ಬಗ್ಗೆ ಮಾತನಾಡುವಾಗ ತಡವರಿಸಿಕೊಂಡು ಪದವೊಂದನ್ನು ತಪ್ಪಾಗಿ ಉಚ್ಚರಿಸಿದರು. ಆ ಪದವನ್ನು ತಕ್ಷಣವೇ ಸರಿಪಡಿಸಿಕೊಂಡು ಸತ್ಯಾಗ್ರಹವೆಂದರೆ ಸತ್ಯದ ಮಾರ್ಗವೆಂದು ಅರ್ಥೈಸಿದರು. ಆದರೆ ಅವರ ತಿದ್ದಿಕೊಂಡು ಮಾತನಾಡಿದ ಭಾಗವನ್ನು ಎಡಿಟ್ ಮಾಡಿ ಅವರನ್ನು ಅಪಹಾಸ್ಯ ಮಾಡಲು ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ಆದ್ದರಿಂದ ನಾವು ಈ ಹೇಳಿಕೆಯನ್ನು ಸಂದರ್ಭದಿಂದ ಹೊರಗಿಡಲಾಗಿದೆ ಎಂದು ಗುರುತಿಸಿದ್ದೇವೆ.

Have a question or correction on one of our fact-checks?

If you think a claim has been misjudged or requires correction, please send us evidence to support your error claim. We will revisit our evidence and verdict and conduct additional research to verify new information.

Fact Check of the Day

misleading

397 children were diagnosed with heart inflammation after receiving Pfizer’s COVID-19 vaccine in U.S.